ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧

ಪ್ರಿಯರೆ,
ನಾನು ಆಗಾಗ ಬರೆಯುವ ವಿಜ್ಞಾನದ ಲೇಖನಗಳನ್ನು ಇಲ್ಲಿ ನಿಮಗಾಗಿ ಪುಸ್ತಕರೂಪದಲ್ಲಿ ಕೊಡಲು ಬಯಸಿದ್ದೇನೆ. ವಿಶೇಷವಾಗಿ ಹೈಸ್ಕೂಲು ಮಟ್ಟದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸಲಾಗಿದೆ. ಕನ್ನಡದಲ್ಲಿ ವಿಜ್ಞಾನ ವಿಷಯದ ಬಗ್ಗೆ ಲೇಖನಗಳನ್ನು ಓದಿ, ಕನ್ನಡದಲ್ಲೇ ಬೆಳೆಯಲು ನಮ್ಮ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗುತ್ತದೆ ಎಂಬ ಪುಟ್ಟ ವಿಶ್ವಾಸ ನನ್ನದು. ಕನ್ನಡದ ವಿಜ್ಞಾನ ಲೇಖಕರ ಬಳಗವು ಈಗ ಎಲ್ಲ ಪತ್ರಿಕೆಗಳಲ್ಲೂ ಲೇಖನಗಳನ್ನು ಬರೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ನನ್ನದೂ ಒಂದು ಯತ್ನವಿದು.  ನಿಮ್ಮ  ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುವೆ.
ಈ ಸಂಚಿಕೆಯಲ್ಲಿರುವ ಚಿತ್ರಗಳು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿವೆ. ಆದ್ದರಿಂದ ದಯವಿಟ್ಟು ಇವುಗಳನ್ನು ಮುದ್ರಣದಲ್ಲಾಗಲೀ, ಮರುಹಂಚಿಕೆಯಲ್ಲಾಗಲೀ ಬಳಸುವುದನ್ನು ನಿಷೇಧಿಸಲಾಗಿದೆ, ಗಮನಿಸಿ.
ಮುಕ್ತ ಮಾಹಿತಿಗೆ ಪುಟ್ಟ ಹೆಜ್ಜೆ ಇಡುವ ನಿಟ್ಟಿನಲ್ಲಿ ‘ಮಿತ್ರಮಾಧ್ಯಮ’ದ ಮ್ಯಾಗಜಿನ್ ಪ್ರಯೋಗದ ಎರಡನೇ ಸಂಚಿಕೆ ಇದು.
ವಿಜ್ಞಾನದಲ್ಲಿ ಭಾರತೀಯರ ಕೊಡುಗೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಆದ್ದರಿಂದ ನಮ್ಮ ಪರಂಪರೆಯ ಹೆಮ್ಮೆಯ ಖಗೋಳ ವೀಕ್ಷಣೆಯ, ಸಂಶೋಧನೆಯ ಪ್ರಾಚೀನ ತಾಣವಾದ `ಜಂತರ್ ಮಂತರ್ ಹೆಸರನ್ನೇ ಈ ವಿಜ್ಞಾನ ಸಂಚಿಕೆಗೆ ಇಟ್ಟಿದ್ದೇನೆ. ನೆನಪಿಡಲು ಸುಲಭ ತಾನೆ?

ವಿಶ್ವಾಸದಿಂದ
ಬೇಳೂರು ಸುದರ್ಶನ
೧೬ ಏಪ್ರಿಲ್ ೨೦೧೨

 

One Response to “ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧”

Leave a Reply

Your email address will not be published. Required fields are marked *

two × 3 =